ದೇವಸ್ಥಾನದ ಇತಿಹಾಸ

"ಆರಬ್ಧ ಮುತ್ತಮ ಜನಾಃ ನಪರಿತ್ಯಜಂತಿ"
ಉತ್ತಮರಾದ ಜನರು ಪ್ರಾರಂಭಿಸಿದ ಕೆಲಸವನ್ನು ಎಂದಿಗೂ ಕೈ ಬಿಡುವುದಿಲ್ಲ...

ಅಜ್ಜಾವರದ ಜನತೆ ಶ್ರೀ ಮಹಿಷಮರ್ದಿನಿ ದೇವಾಲಯದ ಜೀರ್ಣೋದ್ಧಾರದ ಕೆಲಸವನ್ನು ಅರ್ಧದಲ್ಲಿ ಕೈಬಿಡದೆ ಪೂರ್ತಿಗೊಳಿಸಿದ್ದಾರೆ. ಹದಿನೈದು ವರ್ಷಗಳ ಸುಧೀರ್ಘ ಅವಧಿಯನ್ನು ತೆಗೆದುಕೊಂಡರೂ, ಎಡರು ತೊಡರುಗಳನ್ನು ಎದುರಿಸಿ, ಹಿಡಿದ ಗುರಿಯನ್ನು ಸಾಧಿಸಿದ್ದಾರೆ. ಹೆಚ್ಚಾಗಿ ಬಡವರೇ ವಾಸವಾಗಿರುವ ಈ ಗ್ರಾಮದ ಜನತೆ ಊರ ಹಾಗೂ ಪರಊರ ಉದಾರ ದಾನಿಗಳ ನೆರವಿನಿಂದ ಜನನಿ ಮಹಿಷಮರ್ದಿನಿ ದೇವಿಗೆ ಒಂದು ಸುಂದರವಾದ ಮಂದಿರ ವನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕೃತ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷನಾಗಿ, ಜೀರ್ಣೋದ್ಧಾರದ ಈ ಸುಧೀರ್ಘ ಅವಧಿಯ ಅನುಭವ ಗಳನ್ನು ಮೆಲುಕು ಹಾಕುವುದು ಸಂದರ್ಭೋಚಿತವೆಂದು ಭಾವಿಸುತ್ತೇನೆ.

1980ನೇ ಇಸವಿಯ ಪೂರ್ವಾರ್ಧದ ಅದೊಂದು ದಿನ ದಿ. ಬೇಲ್ಯ ವಿಠಲ ರೈಗಳು 'ನೀವು ದೂತನಾಗಿ ಹೋಗಬೇಕು' ಎಂಬ ಸಂದೇಶವೊಂದನ್ನು ಹೇಳಿ ಕಳುಹಿಸಿದರು. ಒಮ್ಮೆಗೆ ಆಶ್ಚರ್ಯವಾದರೂ, ವಿವರಣೆಯನ್ನು ಕೇಳಿದಾಗ ತೃಪ್ತಿ ಯಾಯಿತು. ಸುಮಾರು ನೂರು ವರ್ಷಗಳಿಂದ ಜೀರ್ಣಾವಸ್ಥೆ ಯಲ್ಲಿರುವ ಮಾತೆ ಶ್ರೀ ಮಹಿಷಮರ್ದಿನಿಯ ದೇವಾಲಯದ ಜೀರ್ಣೋದ್ಧಾರದ ನಿಮಿತ್ತ "ಅಷ್ಟ ಮಂಗಲ ಪ್ರಶ್ನೆ". ಮುಖೇನ ಚಿಂತನೆಗಾಗಿ ತೀರ್ಮಾನಿಸಲಾಗಿತ್ತು. ಶ್ರೀ ದೇವಳಕ್ಕೆ ಸಂಬಂಧಪಟ್ಟ ಬಯಂಬು ಮನೆತನದವರಾದ ಕಾರಣ ದೈವಜ್ಞರನ್ನು ಸ್ವರ್ಣ ಪ್ರಶ್ನೆಗೆ ಆಹ್ವಾನಿಸಲು ನಾನು ಬೇಲ್ಕ ಪ್ರಫುಲ್ಲ ರೈಗಳ ಜತೆ ದೂತನಾಗಿ ಹೋಗಲು ಊರ ಹಿರಿಯರು ನಿಶ್ಚಿಸಿದ್ದರು. ಆ ಪ್ರಕಾರ ಬಾರೆ ಕಣಿಯರ ಮುಖೇನ "ಅಷ್ಟ ಮಂಗಲ ಪ್ರಶ್ನೆ" ಚಿಂತನೆ ನಡೆದು ಜೀರ್ಣೋದ್ಧಾರ ಕೆಲಸವನ್ನು ಹಮ್ಮಿಕೊಳ್ಳಲಾಯಿತು.

ಆದರೆ ಕಾರಣಾಂತರಗಳಿಂದ 1987ನೇ ಇಸವಿ ಅಪರಾರ್ಧದ ತನಕ ಜೀರ್ಣೋದ್ಧಾರದ ಕೆಲಸ ಮುಂದೆ ಸಾಗಲಿಲ್ಲ. ಹೀಗೇಕಾಯಿತು? ಎಂಬ ಚಿಂತನೆಗಾಗಿ ಪುನಃ "ಅಷ್ಟಮಂಗಲ ಪ್ರಶ್ನೆ" ಕೇಳುವುದಾಗಿ ಊರವರು ನಿಶ್ಚಿಸಿದರು. ಶ್ರೀ ಕೊಳಚ್ಚಿಪ್ಪು ಮಹಾಲಿಂಗ ಭಟ್ ದೈವಜ್ಞರಾಗಿ ಮತ್ತು ಶ್ರೀ ಯಂ. ಶೇಖರ ನಾಯರ್ ಫಲ ನಿರೂಪಕರಾಗಿ ದಿನಾಂಕ 3-11-1987ನೇ ಮಂಗಳವಾರದಿಂದ 5-11-1987ನೇ ಗುರುವಾರ ತನಕ ಶ್ರೀದೇವಿ ಸನ್ನಿಧಿಯಲ್ಲಿ "ಅಷ್ಟಮಂಗಲ ಪ್ರಶ್ನೆ" ನಡೆದು, ಕೊನೆಗೆ ಹೊಸ ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿಗಳನ್ನು ರಚಿಸಲಾಯಿತು. ಈ ಎರಡೂ ಸಮಿತಿಗಳ ನೇತೃತ್ವವನ್ನೂ ನಮ್ಮ ತಂದೆಯವರಾದ ದಿ. ಬಯಂಬು ರಾಮರಾಯರು ವಹಿಸಿಕೊಂಡರು. ಮುಂದೆ ಜೀರ್ಣೋದ್ಧಾರ ಕೆಲಸಗಳು ತ್ವರಿತ ಗತಿಯಿಂದ ಸಾಗಿತು. ಉದ್ಯಮೇನೈವ ಸಿದ್ಧಂತಿ ಕಾರ್ಯಾಣಿ ನ ಮನೋ ರಥೈಃ-ಕೆಲಸಗಳು ಕೈ ಗೂಡಬೇಕಾದರೆ ಪ್ರಯತ್ನದಿಂದ ಮಾತ್ರ ಸಾಧ್ಯ. ಕೈಗೂಡಬೇಕೆಂಬ ಬರೀ ಇಚ್ಛೆಯಿಂದಲ್ಲ. ಕೆಲವು ಸಮಾಜ ಘಾತಕ ಶಕ್ತಿಗಳು ನಾವು ಮಾಡುತ್ತಿರುವ ಈ ಪವಿತ್ರ ಕಾರ್ಯಗಳಿಗೆ ಅಡ್ಡಿಯನ್ನುಂಟು ಮಾಡಿದರೂ, ನಮ್ಮ ಅಚಲ ನಿರ್ಧಾರ ಹಾಗೂ ಪ್ರಯತ್ನಗಳ ಮುಂದೆ ಅವುಗಳ ಆಟ ನಡೆ ಯಲಿಲ್ಲ.

ಈ ಮಧ್ಯೆ ತಾರೀಕು 10-1-1988ರಂದು ಶ್ರೀ ದೇವಳದ ಆಡಳಿತ ಸಮಿತಿಯ ಉಪಾಧ್ಯಕ್ಷರಾದ ವಿಠಲ ರೈಗಳು ನಿಧನರಾದ ಆಘಾತ ನಮಗೊದಗಿತು. ಮುಂದೆ ಅವರ ಧರ್ಮ ಪತ್ನಿಯವರಾದ ಶ್ರೀಮತಿ ಭಾಮಾ ವಿ. ರೈಯವರು ದೇವಸ್ಥಾನದ ಅಡಿಸ್ಥಳ (0.24 ಎಕರೆ) ವನ್ನು ದೇವಿಯ ಹೆಸರಿನಲ್ಲಿ ದಾನ ಶಾಸನ ಮಾಡಿ ಸಹಕರಿಸಿದರು. ಜೀರ್ಣೋದ್ಧಾರದ ನಿಮಿತ್ತ ಮೊದಲ ಧನ ಸಂಗ್ರಹ ಯೋಜನೆಯಾಗಿ ಬೆಂಗಳೂರಿನಲ್ಲಿ ಶ್ರೀ ಬಯಂಬು ಶಿವರಾವ್‌ರವರ ನೇತೃತ್ವದಲ್ಲಿ ಮೂರು ದಿನಗಳ ಯಕ್ಷಗಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು. ಇದರಿಂದ -ಸುಮಾರು ರೂ. 33,000/- ಸಂಗ್ರಹವಾಗಿರುತ್ತದೆ, ಅಲ್ಲದೆ ಮುಂದೆ ಅದೃಷ್ಟ ಚೀಟಿ ಹಾಗೂ ಅದೃಷ್ಟ ಠೇವಣಾತಿ ಯೋಜನೆ ಗಳ ಮೂಲಕ ಧನ ಸಂಗ್ರಹ ಮಾಡಲಾಯಿತು.

ದಿನಾಂಕ 30-4-90ರಂದು ಶ್ರೀ ದೇವಳದ ನೂತನ ಗರ್ಭಗುಡಿಯ ಶಿಲಾನ್ಯಾಸದ ಕಾರ್ಯಕ್ರಮ ಜರಗಿತು. ಕಾರ್ಕಳದ ಶಿಲ್ಪಿ ಶ್ರೀ ಶ್ಯಾಮರಾಯ ಆಚಾರ್ಯರಿಂದ ಷಢಾಧಾರಷ್ಟಾ ಸಾಧನಗಳನ್ನು ಪಡೆದು, ದಿನಾಂಕ 4-6-1990 ರಂದು ಶ್ರೀ ದೇವಿಯ ಷಢಾಧಾರ ಪ್ರತಿಷ್ಠೆಯನ್ನು ಬ್ರಹ್ಮಶ್ರೀ ಕುಂಟಾರು ಸುಬ್ರಾಯ ತಂತ್ರಿಗಳ ನೇತೃತ್ವದಲ್ಲಿ ನಿ 'ರವೇರಿಸಲಾಯಿತು.

ಶ್ರೀ ದೇವಳದ ಪ್ರಧಾನ ಶಿಲ್ಪಿಯಾಗಿ ಶ್ರೀ ಶ್ರೀಧರ ಕಾರಂತರು ಸಂಬಂಧಪಟ್ಟ ನಕ್ಷೆಗಳನ್ನು ತಯಾರಿಸಿ, ಸಂಪೂರ್ಣ ಮಾಹಿತಿಗಳನ್ನೊದಗಿಸಿ ನಮಗೆ ಸಹಕರಿಸಿದರು. ಕಾಸರ -ಗೋಡಿನ ನಿವೃತ್ತ ಇಂಜಿನಿಯರ್ ಶ್ರೀ ಸುಬ್ರಹ್ಮಣ್ಯ ಅಯ್ಯರ್ ತಾಂತ್ರಿಕ ಸಲಹೆಗಾರರಾಗಿ ನೆರವಿತ್ತರು. ಮುಂದೆ ತ್ವರಿತ ಗತಿಯಿಂದ ಜೀರ್ಣೋದ್ಧಾರ ಕೆಲಸಗಳು ಪ್ರಾರಂಭವಾದವು. ಪರಿಣಾಮವಾಗಿ ಊರ ಹಾಗೂ ಪರಊರ ದಾನಿಗಳಿಂದ ಧನ ಸಂಗ್ರಹ ಮಾಡುವ ಕೆಲಸವು ಪ್ರಾರಂಭವಾಯಿತು. ಇದೊಂದು ಅಪೂರ್ವ ಅನುಭವವೇ ಸರಿ. ಅನೇಕ ರೀತಿಯ ಜನರನ್ನು ಭೇಟಿ ಮಾಡುವ ಪ್ರಸಂಗ ನಮ್ಮ ಪಾಲಿಗೆ ಬಂತು.

ಹಲವರು ಸಂತೋಷ ಮುಖದಿಂದ ನಮ್ಮನ್ನು ಸ್ವಾಗತಿಸಿದ್ದರೆ ಇನ್ನೂ ಕೆಲವರಿಗೆ ನಮ್ಮ ದರ್ಶನ ನುಂಗಲಾರದ ತುತ್ತಾಯಿತು. ಕೆಲವರು ಮನೆಯಲ್ಲಿ ಇರುತ್ತಾ ಇಲ್ಲವೆಂಬ ಸಂದೇಶ ತಲಪಿಸಿದರೆ ಇನ್ನೂ ಕೆಲವರು ನಮ್ಮನ್ನೂ ಬರಿ ಕೈಯಲ್ಲಿ ಕಳುಹಿಸಿದರು. ಒಟ್ಟಾರೆ ನಮ್ಮನ್ನು ಪ್ರೋತ್ಸಾಹಿಸಿ ದವರೇ ಹೆಚ್ಚು ಮಂದಿ ಎಂದು ಹೇಳಬಹುದು. ನೀವ್ಯಾಕೆ ಬೇಡುತ್ತೀರಿ? ನಿಮ್ಮನ್ನು ದೇವಸ್ಥಾನ ಕಟ್ಟಲು ಯಾರು ಹೇಳಿದರು? ಶುರು ಮಾಡಿದ್ದೀರಾದರೆ ನೀವೇ ಕಟ್ಟಿ ಮುಗಿಸಿ ಎಂದು ಕಟುವಾಗಿ ಹೇಳಿದವರೂ ಇದ್ದಾರೆ. ನಿಮ್ಮ ಊರಿನ ದೇವಸ್ಥಾನಕ್ಕೆ ಒಂದು ಸಾವಿರ ರೂಪಾ ಕೊಟ್ಟರೆ ನಮ್ಮ ಊರಿನ ದೇವಸ್ಥಾನಕ್ಕೆ ಹತ್ತು ಪಟ್ಟು ಕೇಳಿಯಾರು ಎಂದು ವ್ಯಂಗ್ಯವಾಡಿದವರೂ ಇದ್ದಾರೆ. 'ನಿಮ್ಮ ಊರಿನ ದೇವಿ ನಮ್ಮ ಸೊತ್ತನ್ನು ರಕ್ಷಣೆ ಮಾಡಲಿ, ಆ ಮೇಲೆ ಧನ ಸಹಾಯ ಕೊಡುತ್ತೇವೆ' ಹೀಗೆ ನುಡಿದವರೂ ಇದ್ದಾರೆ.

ನಿಮ್ಮ ಊರಿನಲ್ಲಿ ಅಷ್ಟು ಜನ ಶ್ರೀಮಂತರು ಇರುವಾಗ ನಮ್ಮ ಊರಿಗೆ ಯಾಕೆ ಬಂದಿದ್ದೀರಿ? ನಮ್ಮ ಊರಿನಲ್ಲಿ ದೇವಸ್ಥಾನ ಇಲ್ಲವೇ? ಎಂದು ಹೇಳಿ ಧನ ಸಹಾಯವಿತ್ತು ಕಳುಹಿಸಿದ ಪರ ಊರ ಮಹನೀಯರೂ ಇದ್ದಾರೆ. ನೀವು ಭಜನಾ ಮಂದಿರ ಕಟ್ಟುತ್ತೀರೊ ಹಣ ಕೊಡುತ್ತೇನೆ. ಆದರೆ, ದೇವಸ್ಥಾನಕ್ಕೆ ಕೊಡುವುದಿಲ್ಲ ಎಂದು ನುಡಿದವರನ್ನೂ ಭೇಟಿ ಮಾಡಿದ್ದೇವೆ. ಒಳ್ಳೆಯ ಕೆಲಸಕ್ಕೆ ಹೊರಟಿದ್ದೀರಿ. ದೇವರು ನಿಮಗೆ ಒಳಿತನ್ನು ಮಾಡಲಿ ಎಂದು ಹರಸಿ ಚೆನ್ನಾಗಿ ಧನ ಸಹಾಯವಿತ್ತವರು ಅನೇಕರಿದ್ದಾರೆ. ಮೇಲೆ ಉಲ್ಲೇಖಿಸಿದ ವಿವಿಧ ರೀತಿಯ ಜನರು ನಮಲ್ಲಿ ಇದ್ದರೂ ಅಲ್ಲಲ್ಲಿ ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುವುದನ್ನು ನಾವು ಗಮನಿಸಬಹುದು. ಇದಕ್ಕೇ ನಮ್ಮ ಸಂಸ್ಕೃತಿಯನ್ನು "ವಿವಿಧತೆಯಲ್ಲಿ ಏಕತೆ" ಎಂದು ಹೇಳುವುದು. ಶ್ರೀ ಶೃಂಗೇರಿ ಜಗದ್ಗುರುಗಳು ರೂ. 15,000/-ಕೊಟ್ಟು ನಮ್ಮನ್ನು ಹರಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ನಮಗೆ ರೂ. 50,000/- ನೀಡಿ ಸಹಕರಿಸಿದ್ದಾರೆ. ಹೀಗೇ ಊರ ಹಾಗೂ ಪರ ಊರ ದಾನಿಗಳಿಂದ ಧನ ಸಹಾಯ ಪಡೆದು ಶ್ರೀದೇವಿಯ ಗುಡಿಯನ್ನು ನಿರ್ಮಿಸಿಯಾಗಿದೆ. ಗುಡಿಯನ್ನು ನೋಡಿದ ಅನೇಕ ಮಂದಿ ಪ್ರಶಂಸನೆಯ ಮಾತುಗಳನ್ನಾಡಿ ನಮ್ಮನ್ನು ಪ್ರೋತ್ಸಾಹಿಸಿ ದ್ದಾರೆ. ಸುಮಾರು ನೂರು ವರ್ಷಗಳಿಂದ ಪೂಜಾದಿಗಳು ನಡೆಯದೆ ಇದ್ದ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವ ಈ ಪವಿತ್ರ ಕಾರ್ಯ ಈಗಿನ ಅಜ್ಜಾವರದ ನಿವಾಸಿಗಳ ಪಾಲಿಗೆ ಒದಗಿದುದು ಒಂದು ಸೌಭಾಗ್ಯವೇ ಸರಿ.

ಈ ಪವಿತ್ರ ಕಾರ್ಯದಲ್ಲಿ ನಮ್ಮೊಡನೆ ಅಹರ್ನಿಶಿ ದುಡಿದು ಶ್ರೀ ಮೋನಪ್ಪ ಮಾಸ್ತರರು ತಮ್ಮ ನಿವೃತ್ತ ಜೀವನ ವನ್ನು ಸಾರ್ಥಕಗೊಳಿಸಿದ್ದಾರೆ. ನಮ್ಮ ಮಾತೃಶ್ರೀಯವರಾದ ದಿ. ಶಾರದಮ್ಮನವರು ಶ್ರೀದೇವಿಯ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶೋತ್ಸವದ ಬಗ್ಗೆ ಅಪಾರ ಆಸಕ್ತಿ ಉಳ್ಳವರಾಗಿದ್ದರು. ಆದರೆ ಬ್ರಹ್ಮ ಕಲಶೋತ್ಸವವನ್ನು ನೋಡುವ ಭಾಗ್ಯ ಅವರಿಗಿಲ್ಲದಾಯಿತು ಅವರು 18-1-1993 ರಂದು ದೈವಾಧೀನರಾದರು. ನಮ್ಮ ಆಡಳಿತ ಹಾಗೂ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರೂ, ನಮ್ಮ ತಂದೆಯವರೂ ಆದ ದಿ. ರಾಮರಾಯರು ದೇವಸ್ಥಾನದ ಬಗ್ಗೆ ಅತ್ಯಂತ ಆಸಕ್ತಿ ಉಳ್ಳವರಾಗಿದ್ದರು. ಅಲ್ಲದೆ ಅವರು ಪರಮ ದೈವಭಕ್ತರಾಗಿದ್ದರು. ಅವರೂ ಕೂಡಾ 10-12-1993ರಂದು ದೈವಾಧೀನರಾದರು. ಆಮೇಲೆ ಆಡಳಿತ ಸಮಿತಿಯ ಅಧ್ಯಕ್ಷನಾಗಿ ನನ್ನ ಅಣ್ಣ ಶ್ರೀ ಎ. ಶಿವರಾವ್ ಆಯ್ಕೆಯಾದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸ್ಥಾನ ನನ್ನ ಪಾಲಿಗೆ ಒದಗಿತು. ಶ್ರೀ ಶಿವರಾಯರು ಬೆಂಗಳೂರಿನಲ್ಲಿ ಇರುವ ಕಾರಣ ಈ ಊರಿಗೆ ಸಂಬಂಧವಿಲ್ಲದಿದ್ದರೂ ಅಲ್ಲಿನ ಅನೇಕ ದಾನಿಗಳು ನಮಗೆ ಹೆಚ್ಚಿನ ಧನ ಸಹಾಯವಿತ್ತಿದ್ದಾರೆ.

ಹಿಂದಿನ ದೇವಾಲಯವು ಅಗ್ನಿಗಾಹುತಿಯಾಗಿದ್ದರಿಂದ ನಮಗೆ ಹಳೆಯ ಯಾವುದೇ ವಸ್ತುಗಳು ಉಪಯೋಗಕ್ಕೆ ಸಿಗಲಿಲ್ಲ. ಎಲ್ಲಾ ಹೊಸತಾಗಿ ನಿರ್ಮಾಣವಾಗಬೇಕಾಯಿತು. ಹಳೆಯ ಅವಶೇಷವನ್ನು ತೆಗೆಯುವ ಕೆಲಸ, ಪಾಯದ ಕೆಲಸ, ಮಣ್ಣು ತುಂಬಿಸುವ ಕೆಲಸ ಎಲ್ಲಾ ಶ್ರಮದಾನದ ಮೂಲಕ ನಡೆಯಿತು. ಈ ಮಣ್ಣನ್ನು ನಮ್ಮ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಿಂದ ಅಗೆದು ತಂದ ಕಾರಣ, ಶಾಲೆಯ ಆಟದ ಮೈದಾನ ಕೂಡಾ ತಯಾರಾಗುವಂತಾಯಿತು. ಉಳ್ಳಾಗುಳ ಹಾಗೂ ವಿಷ್ಣುಮೂರ್ತಿ ಚಾವಡಿ ಅಡಿಸ್ಥಳದ ನೀಕದ ಕೆಲಸ ಕೂಡಾ ಶ್ರಮದಾನಿಗಳು ನೆರವೇರಿಸಿದರು. ಶ್ರಮದಾನದಲ್ಲಿ ಊರ ಹಾಗೂ ಪರಊರ ಸಾವಿರಾರು ಜನ ಭಾಗವಹಿಸಿದ್ದಾರೆ. ದೇವಸ್ಥಾನದ ಜತೆಗೆ ವಿಷ್ಣುಮೂರ್ತಿ ಚಾವಡಿ, ಉಳ್ಳಾಗುಳ ಚಾವಡಿ ಮತ್ತು ಜಳಕದ ಕೆರೆಗಳನ್ನು ಕೂಡಾ ನಿರ್ಮಿಸಿ ಜತೆಯಲ್ಲೇ ಬ್ರಹ್ಮಕಲಶ ಮಾಡಬೇಕೆಂದು ಅಷ್ಟ ಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಕಾರಣ, ಅವುಗಳನ್ನು ಕೂಡಾ ಮಾಡಿ ಮುಗಿಸಲಾಗಿದೆ. ದೇವಳದ ಮಾಡನ್ನು ಆರ್.ಸಿ.ಸಿ. ಚಾವಣಿಯನ್ನಾಗಿ ಮಾಡಿ, ಮೇಲೆ ಹಂಚನ್ನು ಇಡಲಾಗಿದೆ. ಒಟ್ಟು ಜೀರ್ಣೋದ್ಧಾರ ಕೆಲಸಗಳಿಗೆ ರೂ. ಹತ್ತು ಲಕ್ಷದಿಂದ ಮೇಲ್ಪಟ್ಟು ಖರ್ಚಾಗಿರುತ್ತದೆ. ಬ್ರಹ್ಮ ಕಲಶೋತ್ಸವಕ್ಕೆ ಅಂದಾಜು ವೆಚ್ಚ ರೂ. 3.5 ಲಕ್ಷ ತಗಲಬಹುದು.

ಕಾರ್ಕಳದ ಶಿಲ್ಪಿ ಶ್ರೀ ಶ್ಯಾಮರಾಯ ಆಚಾರ್ಯರು, ಶ್ರೀ ದೇವಿಯ ಹೊಸ ವಿಗ್ರಹ, ಪರಿವಾರ ದೇವರುಗಳಾದ ಗಣಪತಿ, ಶಾಸ್ತಾವು ಆಂಜನೇಯ ಹಾಗೂ ನಾಗನ ವಿಗ್ರಹಗಳನ್ನು ಸುಂದರವಾಗಿ ನಿರ್ಮಿಸಿ ಕೊಟ್ಟಿದ್ದಾರೆ. ಶ್ರೀ ದೇವಳದ ಸ್ಥಳ ಪುರಾಣವನ್ನು ತಿಳಿದುಕೊಂಡು ಸ್ಮರಣ ಸಂಚಿಕೆಯಲ್ಲಿ ಅಚ್ಚು ಹಾಕಿಸಬೇಕೆಂಬ ಆಸೆ ನಮ್ಮ ದಾಗಿತ್ತು. ಆದರೆ ಸ್ಥಳ ಪುರಾಣದ ಬಗ್ಗೆ ಮಾಹಿತಿ ನಮಗೆ ದೊರೆಯಲೇ ಇಲ್ಲ. ಆದರೆ ಒಂದು ಸಾವಿರ ವರ್ಷದ ಹಿಂದೆ ಕಟ್ಟಲ್ಪಟ್ಟ ದೇವಸ್ಥಾನವೆಂಬುದು ಪ್ರಶ್ನೆಯಲ್ಲಿ ತಿಳಿದು ಬಂದಿದೆ. ಅಲ್ಲದೆ ಗರ್ಭಗುಡಿಯ "ಗಜಸೃಷ್ಟ" ಆಯ ದೇವಳವು ಅತ್ಯಂತ ಪ್ರಾಚೀನವಾದುದು ಎಂದು ತಿಳಿಸುತ್ತದೆ. ಶ್ರೀ ದೇವಿಯ ಮೂರ್ತಿಯು ಹೊಯ್ಸಳ ಮಾದರಿಯ ಶಿಲ್ಪಕಲಾ ಶೈಲಿಯಲ್ಲಿರುವುದರಿಂದ (12ನೇ ಶತಮಾನ) ಇದು ಕೂಡಾ ಪ್ರಾಚೀನತೆ ಗುರುತಿಸುವ ಮಾಹಿತಿಯಾಗಿದೆ. ಬಲ್ಲಾಳರ ಕಾಲದಲ್ಲಿ ದೇವಾಲಯ ಪುನಃ ಜೀರ್ಣೋದ್ಧಾರಗೊಂಡಿರಬೇಕು. ಬಲ್ಲಾಳರು ದೇವಸ್ಥಾನದ ಪೂಜಾದಿ ಕಾರ್ಯಗಳಿಗೆ ನಮ್ಮ ವಂಶಸ್ಥರನ್ನು ಉತ್ತರ ದಿಕ್ಕಿನಿಂದ ಕರೆತಂದರೆಂದು "ಆಷ್ಠ ಮಂಗಲ"ದಲ್ಲಿ ತಿಳಿದು ಬಂದಿದೆ. ಬಲ್ಲಾಳರು ನಮಗೇ ಆಸ್ತಿಯನ್ನು ಬಿಟ್ಟು atreciclos. ಇನ್ನೊಂದು ಮಾಹಿತಿಯಂತೆ ನಮ್ಮ ಮೂಲಸ್ಥಾನ ಈಗಿನ ಮಂಡೆಕೋಲು ಗ್ರಾಮದ ಪೇರಾಲಿನ ಹತ್ತಿರದ ದೇವಸ್ಯವಾಗಿತ್ತಂತೆ. ಆದ ಕಾರಣ ಬಜಪಿಲ ಉಳ್ಳಾಗುಳ ಸ್ಥಾನಕ್ಕೂ ನಮಗೂ ಈಗಲೂ ನಿಕಟ ಸಂಬಂಧವಿದೆ. ತಮ್ಮ ಸೊತ್ತನ್ನೆಲ್ಲಾ ಕಳೆದುಕೊಂಡು ನಮ್ಮ ಪೂರ್ವಜರು ಕೊಡಗಿಗೆ ವಲಸೆ ಹೋದರಂತೆ. ಅಲ್ಲಿ ತಮ್ಮ ಬುದ್ಧಿಶಕ್ತಿಯಿಂದ ಕೊಡಗು ರಾಜನ ದೀವಾನರಾಗಿ (ದೀವಾನ್ ಲಕ್ಷ್ಮಿ ನಾರಪ್ಪಯ್ಯ) ತಾವು ಕಳೆದುಕೊಂಡ ದೇವಸ್ಥ ಹಾಗೂ ಅಜ್ಞಾವರ ಗ್ರಾಮದ ಎಲ್ಲಾ ಆಸ್ತಿಗಳನ್ನು ಪುನಃ ಪಡೆದುಕೊಂಡರಂತೆ. ಹಾಗೇನೇ ಶ್ರೀ ದೇವಳದ ಮೊಕ್ತಸರಿಕೆ ನಮಗೆ ಬಂದಿರಬೇಕು. ಒಂದು ಕಾಲದಲ್ಲಿ ಆಜ್ಞಾವರ ಗ್ರಾಮ ಅತ್ಯಂತ ವೈಭವದಿಂದ ಇದ್ದಿರಬೇಕು ಎಂಬುದಕ್ಕೆ ಇಲ್ಲಿರುವ ಐದು ದೇವಾಲಯಗಳೇ ಸಾಕ್ಷಿ. ಶ್ರೀ ಮಹಿಷಮರ್ದಿನಿ ಮಾತೆ ಸಕುಟುಂಬಿಕಳಾಗಿ ಇಲ್ಲಿ ನೆಲಸಿದಳೋ ಎಂಬಂತೆ, ಮುಳ್ಳದಲ್ಲಿ ಮಹಾಗಣಪತಿ, ಕಾಂತಮಂಗ್ಲದಲ್ಲಿ ಸುಬ್ರಾಯ, ತುದಿಯಡ್ಕ ದಲ್ಲಿ ಸದಾಶಿವ, ಕರ್ಲಪ್ಪಾಡಿಯಲ್ಲಿ ಶಾಸ್ತಾವು ಮತ್ತು ಗ್ರಾಮದ ಕೇಂದ್ರ ಅಚ್ಚಾವರದಲ್ಲಿ ಸ್ವತಃ ಮಾತೆಯ ಗುಡಿ ಗಳನ್ನು ಕಾಣಬಹುದು. ಈ ಗ್ರಾಮವನ್ನು ಗುಡಿಗಳ ನಾಡು ಎಂದು ಹೇಳಿದರೂ ತಪ್ಪಾಗಲಾರದು. ಅತ್ಯಂತ ಧಾರ್ಮಿಕ ಮನೋಭಾವದವರು ನಮ್ಮ ಗ್ರಾಮದ ಪೂರ್ವಜರಾಗಿದ್ದು ನಾವು ಕೂಡಾ ಅವರ, ಹೆಜ್ಜೆಯನ್ನು ಅನುಸರಿಸಬೇಕಾದುದು ನಮ್ಮ ಕರ್ತವ್ಯವಾಗಿದೆ. ಒಂದು ದೇವಾಲಯ ಮಾತ್ರ ಜೀರ್ಣೋದ್ಧಾರಗೊಂಡಿದೆ. ಉಳಿದ ದೇವಾಲಯಗಳ ಕಡೆಗೂ ಗಮನಹರಿಸಬೇಕಾಗಿದೆ. ಆಧುನಿಕತೆಯಿಂದಾಗಿ ಅಧುಪತನದ ಕಡೆಗೆ ಸಾಗುತ್ತಿರುವ ನಮ್ಮ ಜನಾಂಗವನ್ನು ದೇವಾಲಯಗಳೇ ರಕ್ಷಿಸಬೇಕಾಗಿದೆ. ಅಂತಹ ಒಂದು ಪ್ರಯತ್ನ ಇಲ್ಲಿ ನಡೆದಿದೆ.

ಜೀರ್ಣೋದ್ಧಾರದ ಎಲ್ಲಾ ಕೆಲಸ ಮುಗಿದಿದ್ದು ಶ್ರೀ đa ra 31-3-9500 8-4-950 ಯಲಿರುವ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿ ನಿಂತಿದೆ. ಕರ್ಮಣೇ ವಾಧಿಕಾರಸ್ಥ ಮಾ ಫಲೇಷು ಕದಾಚನ ಮಾ ಕರ್ಮ ಫಲ ಹೇತು ರ್ಭೂಮರ್ಾತೇ ಸಂಗೋಸ್ತ್ರ ಕರ್ಮಣಿ! ಗೀತಾಚಾರ್ಯನಾದ ಶ್ರೀಕೃಷ್ಣನು "ಫಲಾಪೇಕ್ಷೆಯಿಲ್ಲದೆ ಕರ್ಮವನ್ನು ಮಾಡಬೇಕು. ಫಲ ಸಿಗಲಿಲ್ಲವೆಂದು ಕರ್ಮವನ್ನು ಅರ್ಧದಲ್ಲಿ ಬಿಡಬಾರದು ಎಂಬುದಾಗಿ ಹೇಳಿದ್ದಾನೆ.

🙏 ಶ್ರೀ ದೇವಳದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಂಡು ಶ್ರಮಿಸಿದ ಎಲ್ಲಾ ಭಕ್ತರಿಗೆ ಹೃತ್ಪೂರ್ವಕ ಕೃತಜ್ಞತೆಗಳು 🙏